Friday, January 27, 2012

ಮರಕ್ಕೆ ಹುಟ್ಟಿದ ಬೀಜ -

ತಲೆ ಮೇಲೆ
ಹೊತ್ತಿದ್ದೇನೆ ಬೀಜಗಳ
ಉತ್ತುವದಷ್ಟೇ ಬಾಕಿ.

ಸಸಿಯೊಳಗೆ ಸಸಿ ಚಿಗುರಿ
ಚಿಗುರೇ ಸಸಿ ನುಂಗಿ
ಬಾಯ್ದೆರೆದಿದೆ ಭೂಮಿ
ಅವೆಷ್ಟೋ ಬೇರುಗಳ ನುಂಗಿ.

ಮರದ ಬೇರುಗಳು
ಮರೆಯಾಗಿ ಹೋದಾಗ
ನೆಲವೂ ನಾಲಗೆ ಚಾಚುತ್ತದಂತೆ.

ಹೊತ್ತಷ್ಟು ದಣಿದು
ಅಗೆದಷ್ಟು ಮಣಿದು .,
ಮಣ್ಣು ಹೊರ ಚೆಲ್ಲಿದೆ ಬೀಜಗಳ
ನೀವು ಮನುಜ ಸೃಷ್ಟಿ
ನೀವೇನು ಮರಕ್ಕೆ ಹುಟ್ಟಿದಿರೆ ..?

ನೆಲದಣಿದು ಒಡಲಾರಿ
ಮತ್ತೆ ನೀರಿಟ್ಟು ನಿಂತಿದ್ದೇನೆ
ಗತಿ ಇರದೇ
ಅವೇ ಬೀಜಗಳ ಹೊತ್ತು ..

ನಾಟುವದೋ
ನಮ್ಮೆದೆಯ ಮೀಟುವದೋ....?

Monday, March 22, 2010

mahaaswapna